ಭಾನುವಾರ, ಆಗಸ್ಟ್ 4, 2013

ಬಿಳ್ಕೊಡುಗೆ


ಓ ಅತಿಥಿ.......
ಭಾರವಾಗುತಿದೆ  ಮನವು
ಆಧ್ರ ವಾಗುತಿದೆ
ಕಣ್ಣು ಗಳೆರಡೂ
ಬೇಗುತಿದೆ ಹ್ರದಯ
ನಿನ್ನ ಬಿಳ್ಕೊಡಲು

ಓ ಅತಿಥಿ.......
ನೀ ಬಂದೆ ಸೌಭಾಗ್ಯವಾಗಿ
ನೀ ತಂದೆ ಸೌಜನ್ಯವಾಗಿ
ಉಡುಗೊರೆಗಳನ್ನ
ಕಾರುಣ್ಯಕ್ಕಾಗಿ ಹತ್ತು
ಕ್ಷಮಾಪನೆಗಾಗಿ  ಹತ್ತು
ನರಕ ಮೋಚನೆಗಾಗಿ
 ಹತ್ತು..

ಓ ಅತಿಥಿ......
ಎಡವಿದೆನು ನಾ
ನಿನ್ನ ಸತ್ಕರಿಸಲು
ನೀ ಸಾಕ್ಷಿ ನುಡಿಯುವದಿನ
ಕಡೆಗಣಿಸದಿರು ಈ ನನ್ನ
ಬೇಡುವೆನು ಜಗದೊಡಯನಲ್ಲಿ
ಕರುಣಿಸು ನಮಗೆ ಹಲವಾರು
ಅವಸರಗಳನ್ನ  ಸತ್ಕರಿಸಲು ನಿನ್ನ

ಓ ಅತಿಥಿ......
ಇನ್ನೆಲ್ಲಿದೆ ಅತ್ತಾಳದ ಸಂಭ್ರಮ
ಇನ್ನೆಲ್ಲಿದೆ ಇಫ್ತ್ಹಾರಿನ ಸಂತಸ
ಇನ್ನೆಲ್ಲಿದೆ ತರಾವೀಹ್ ನ ಸಂಗಮ
ಇನ್ನೆಲ್ಲಿದೆ ಕಿಯಾಮುನ್ ಲೈಲ್ ನ 
ಸಮಾಪನ

ಓ ಅತಿಥಿ ...
ನಿನ್ನ ಬಿಳ್ಕೊಡುವ ಮುನ್ನ
ಪ್ರಾರ್ಥನೆ ಒಂದಿದೆ ನನ್ನ
ಸರ್ವ ಶಕ್ತನಲ್ಲಿ
ಮರಣವು ಸುನಿಶ್ಚಿತವು ನನಗೆ
ಎಂದಾದರು ಒಂದು ದಿನ
ಆಗಲಿ ಅದು ನಿನ್ನ ಮಡಿಲಲ್ಲಿ
ಅಮ್ಮನ ಮಡಿಲಲ್ಲಿ
ಕಂದಮ್ಮನ ನಿದ್ದೆಯಂತೆ
ಆಗಲಿ ಅದು ಲೈಲತ್ತುಲ್ ಕದಿರಿನ ರಾತ್ರಿ
ಆಗಲಿ ಅದು ಜಗನ್ನಾಥನಿಗೆ  ಸಾಷ್ಟಾಂಗ
ಎರಗಿದ ಆ ಶುಭ ಸಮಯ

ಓ ಅತಿಥಿ......
ಯಾರು ಯಾರಿಗೆ
ವಿದಾಯ ಹೇಳುತ್ತಿರುವುದು
ಇಲ್ಲಿ
ಗೊತ್ತಿಲ್ಲ ನನಗೆ
ನಾ ನಿನಗೋ ಅಲ್ಲ
ನೀ ನನಗೋ
ನೀ ಮರಳಿ ಬರುವಾಗ
ಬಾಕಿ ಇರಬಹುದೇ
ಈ ದೇಹವೂ ಈ ದೇಹಿ ಯೂ ..!!!





ಖರ್ಜೂರದ ನಾಡಲ್ಲಿ ಕುಳಿತು


ಖರ್ಜೂರದ ಎಲೆ
ಅಲ್ಲಾಡುವುದನ್ನೂ
ತಿಳಿಸಬೇಕೆಂದು
ಹಠ ಹಿಡಿಯುವ ಹೆಣ್ಣೇ
ನಿನ್ನಲ್ಲಿ ನಾನೆಷ್ಟು ಸತ್ಯಗಳನ್ನು
ಸಮರ್ಥವಾಗಿ ಅಡಗಿಸಿಟ್ಟೆನು

ಹಲವು ಸಲ ಪ್ರಯೋಗಿಸಿ
ಸವೆದು ಹೋದ
ಸುಖವೆಂಬ ಪದ ಮತ್ತೊಮ್ಮೆ
ಸಾಲ ತೆಗೆದು
ಹೇಳಲೇ ನಾನು
"ನನಗಿಲ್ಲಿ ಸುಖವೆಂದು"

ನನ್ನಲ್ಲಿ ನೀ ಹೇಳಿದ
ಮಾತು
ಮತ್ತೊಮ್ಮೆ  ಪ್ರತಿದ್ವನಿಸುತ್ತಿದೆ
ಕಿವಿಗಳಲ್ಲಿ
ನೀವಿಲ್ಲದ ರಂಜಾನ್ ಕಾಲ
ಅಮ್ಮ ಇಲ್ಲದ ಮನೆಯಂತೆ

ವ್ರತ ಮುರಿಯಲು
ಖರ್ಜೂರ ತೆಗೆದಿರಿಸುವಾಗ
ನೆನಪಿಸು ನೀ ನನ್ನ
ಕಾರಣ
ನಾನೀಗ ಖರ್ಜೂರದ
ಊರುಗಾರನಲ್ಲ .......




ಮಂಗಳವಾರ, ಜುಲೈ 16, 2013

ಸೋಮವಾರ, ಜುಲೈ 15, 2013

ಕಾದಿರುವಿಕೆ




ಮಗುವೇ......
ಕಾದಿರುವಿಕೆಯ
ಹೆಬ್ಬಾಗಿಳುಗಳು
ಮುಚ್ಚಿ ಹೋಗುವುದೆಂದು
ಗೊತ್ತು ನನಗೆ
ದಾರಿಗೆ ಕಣ್ಣಿಟ್ಟು ನಿಂತಿರುವ
ನಿನ್ನ ಮುಂದೆ
ಬಂದು ಸೇರುವೆನು ನಾ
ಒಂದು ದಿನ ಅತಿಥಿಯಂತೆ
ನಿನಗಾಗಿ ಕಾದಿರಿಸಿದ
ಆಟಿಕೆಗಳು ಒಡೆದು
ಹೋಗುವ ಮುನ್ನ
ಕಿತ್ತು ನೆಡುವೆನು ನನ್ನ
ಮತ್ತಿದೇ ಮರುಬೂಮಿಗೆ
ಕಣ್ಣೀರಿನ ಕಹಿ ರಸಗಳನ್ನು
ಅತ್ತರಿನ ಪರಿಮಳದಿಂದ
ಇನ್ನೆಷ್ಟು ದಿನ
ಮುಚ್ಚಿಡ ಬಲ್ಲೆ
ನಾನು ???





ಶನಿವಾರ, ಜುಲೈ 13, 2013

ವಿದವೆ


ವಿದವೆ

ನೆರಳಮರ ಕಡಿದು
ಜೀವನ ಬೇಗೆಯಲ್ಲಿ
ಒಬ್ಬಂಟ್ಟಿ ಯಾದವಳು
ವಿದವೆ

ವಿದವೆಯ ಹ್ರದಯ ವ್ಯಥೆಗಳು
ಸಾಗರ ಸಮ
ಕಥೆ ಅರಿಯದೆ
ಆಟಿಕೆಗಳಿಗಾಗಿ
ಕಾದಿರುವ
ಮಗುವನ್ನು ಕೈಯಲ್ಲ್ಲೆತ್ತಿ
ಮುಂದೇನೆಂದು ಅರಿಯದೆ
ಜೀವನ ಪಥದಲ್ಲಿ
ಬವಳಿ ಬೆಂಡಾದವಳೇ
ವಿದವೆ

ದಾರಿ ದೀಪಗಳ
ಹೀರು ಬತ್ತಿ
ನಂದಿ ಹೋದಮೇಲೆ
ಕಣ್ಣಲ್ಲಿ ಕತ್ತಲೆಯೇರಿ
ರೆಕ್ಕೆ ಬಳಲಿದ
ಒಂಟ್ಟಿ  ಹಕ್ಕಿ

ಪತಿ ಜೇವಿಸಿದ್ದೂ
ವಿದವೆಗಳಾದವರು
ಪ್ರವಾಸಿಗರ ಪತ್ನಿಯೆಂದಿರು
ಆದರೆ  ಸೂಫಿಯ ಮಅದನಿಯ
ಜೀವನವು ಬರೆಯದೆ ಹೋದ
ಪುಸ್ತಕವು ......






ಮಂಗಳವಾರ, ಜುಲೈ 9, 2013

ಇಶ್ರಥ್ ಜಹಾನ್

ಅವಳೆದ್ದಳು
ಎಂದಿನಂತೆ ಅಂದೂ
ಅರಿವಿಲ್ಲದೆ
ಎದ್ದಿರುವುದು
ಇನ್ನೆಂದೂ ಎದ್ದೇಳದ
ಚಿರನಿದ್ದೆಗೆಂದು

ಅಕಾರಣ
ಅವಳೆದೆಗೆ ಗುಂಡಿಕ್ಕಿ
ಬಿಸಿ ರಕ್ತವ  ಕುಡಿದು ತೇಗಿದರು
ಅಸುರ ಜನ್ಮಗಳು
ಕಾರಣವಿಷ್ಟೇ
ಅವಳ ಹೆಸರಲ್ಲಿತ್ತು
ಇಶ್ರಥ್ ಜಹಾನ್

ಕಾರಣಕರ್ತ
ಇಂದಿಗೂ
ಒಂದು ಪಟ್ಟದಲ್ಲಿ ಕುಳಿತು
ಇನ್ನೊಂದು ಪಟ್ಟಾಭಿಷೇಕ್ಕಕ್ಕಾಗಿ
ಹಾತ್ತೊರೆಯುತ್ತಿರುವವನು .








ಭಾನುವಾರ, ಜುಲೈ 7, 2013

ಪ್ರವಾಸಿ


ಪ್ರವಾಸಿ 


ಊರಿಗೆ ಹೋಗುವ
ಪ್ರವಾಸಿಗೆ
ಊರ ಬಾಲಕಿಯ
ಮನಸ್ಸು

ಉತ್ಸವ ದಿನದಂದು
ಹೊಚ್ಚ ಹೊಸ ಉಡುಪು ದರಿಸಿ
ನಲಿದಾಡುವ ಹೆಣ್ಣು ಮಗುವಿನಂತೆ
ಪರ್ಚೇಸ್ ಗಾಗಿ ಓಡಾಡುವವನು

ಮರಳುಗಾಡಿನ ಹುಡಿ ಗಾಳಿ
ಮರುಬೂಮಿಯ ಬಿಸಿ  ತಾಪದಿಂದ
ಕರಿದೋದ ಕೆನ್ನೆಗಳನ್ನು
ಕೋಣೆಯಲ್ಲಿ ಕುಳಿತು ಮಿನುಕಿಸಲು
ಶ್ರಮಿಸುವವನು

ಅವರಿಗೆ ಅರಿವಿಲ್ಲದ
ಬೆವರಿನ ಗಂಧವನ್ನು
ಅತ್ತರಿನ ಪರಿಮಳದಿಂದ
ಮರೆಯುವವನು

ರಜಾ ದಿನದ
ಮೂರುನಾಲ್ಕು ತಿಂಗಳು
ಸ್ವಂತ್ತ ಮನೆಯಲ್ಲಿಯೂ
ಅತಿಥಿ ಯಾಗುವವನು

ಬೀದಿ ವ್ಯಾಪಾರಿಯಂತೆ
ಕಟ್ಟುಗಳನ್ನು ಬಿಚ್ಚಿ
ಬಾಗ ಮಾಡಿ ವಿತರಿಸುವವನು

ಆದರೂ ಬಿಗಿ ಮುಖಗಳ
ನೋಟವನ್ನು ಎದುರಿಸಲಾಗದೆ
ತಲೆ ತಗ್ಗಿಸುವವನು

ಪತ್ರಾಸಿನ ದಿನಗಳುರುಳಿದಂತೆ
ಜನರೆಡೆಯಲ್ಲಿಯೂ
ಒಬ್ಬಂಟ್ಟಿಯಾಗುವವನು

ಅಂತರಾಳದಲ್ಲಿ ಅಗ್ನಿಯಾದರೂ
ಹೊರಗೆ ನಗುವ ಸೂಸಲು
ಕಲಿತವನು

ಗೊತ್ತು

ಆದರೂ
ನನ್ನೂರಿನ
ಹಚ್ಚ ಹಸಿರಿಗೆ
ಹಾರಿ ಇಳಿಯುವ ನಿಮಿಷ
ಹಗಲ ನಿದ್ರೆಯಲ್ಲಿಯೂ
ಕನಸ ಕಾಣುವೇನಲ್ಲ
ನಾನು