ಭಾನುವಾರ, ಆಗಸ್ಟ್ 4, 2013

ಖರ್ಜೂರದ ನಾಡಲ್ಲಿ ಕುಳಿತು


ಖರ್ಜೂರದ ಎಲೆ
ಅಲ್ಲಾಡುವುದನ್ನೂ
ತಿಳಿಸಬೇಕೆಂದು
ಹಠ ಹಿಡಿಯುವ ಹೆಣ್ಣೇ
ನಿನ್ನಲ್ಲಿ ನಾನೆಷ್ಟು ಸತ್ಯಗಳನ್ನು
ಸಮರ್ಥವಾಗಿ ಅಡಗಿಸಿಟ್ಟೆನು

ಹಲವು ಸಲ ಪ್ರಯೋಗಿಸಿ
ಸವೆದು ಹೋದ
ಸುಖವೆಂಬ ಪದ ಮತ್ತೊಮ್ಮೆ
ಸಾಲ ತೆಗೆದು
ಹೇಳಲೇ ನಾನು
"ನನಗಿಲ್ಲಿ ಸುಖವೆಂದು"

ನನ್ನಲ್ಲಿ ನೀ ಹೇಳಿದ
ಮಾತು
ಮತ್ತೊಮ್ಮೆ  ಪ್ರತಿದ್ವನಿಸುತ್ತಿದೆ
ಕಿವಿಗಳಲ್ಲಿ
ನೀವಿಲ್ಲದ ರಂಜಾನ್ ಕಾಲ
ಅಮ್ಮ ಇಲ್ಲದ ಮನೆಯಂತೆ

ವ್ರತ ಮುರಿಯಲು
ಖರ್ಜೂರ ತೆಗೆದಿರಿಸುವಾಗ
ನೆನಪಿಸು ನೀ ನನ್ನ
ಕಾರಣ
ನಾನೀಗ ಖರ್ಜೂರದ
ಊರುಗಾರನಲ್ಲ .......




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ